ನಮ್ಮ ಬಗ್ಗೆ ಸಂಕ್ಷಿಪ್ತ ಮಾಹಿತಿ

ನಮ್ಮ ಸಂಘಟನೆಯು ಡಾ| ಬಿ.ಆರ್‌ ಅಂಬೇಡ್ಕರ್‌ ಹಾಗೂ ಕುದ್ಮುಲ್‌ ರಂಗರಾವ್‌ರವರ ತತ್ವದಂತೆ ಸಮಾಜದ ಅಭ್ಯುದಯ ಬಯಸಿ, ಮುಂಡಾಲ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಹಿತದೃಷ್ಟಿಯನ್ನಿಟ್ಟುಕೊ೦ಡು, ನಮ್ಮ ಸಮಾಜದ ಯುವಕ, ಯುವತಿಯರ ತಂಡ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕಾಸರಗೋಡು ಹಾಗೂ ವಿವಿಧ ಭಾಗಗಳಲ್ಲಿರುವ ಮುಂಡಾಲ ಸಮಾಜದ ಬಂಧುಗಳಿರುವ ಪ್ರದೇಶಗಳಲ್ಲಿ ಗ್ರಾಮ ಸಭೆ ನಡೆಸಿ, ಮುಂದೆ ಸಂಘದ ಧ್ಯೇಯೋದ್ಧೇಶದಂತೆ ಸ್ಪಜಾತಿ ಯುವಜನತೆಯಲ್ಲಿ ಸಾಮಾಜಿಕ, ಶೈಕ್ಟಣಿಕ ಕ್ಷೇತ್ರಗಳಲ್ಲಿ ಜಾಗೃತರಾಗಲು ಅರಿವು ಮೂಡಿಸಲಾಗಿದ್ದು, ಧಾರ್ಮಿಕ ಪ್ರಜ್ಞೆ ಭ್ರಾತೃತ್ವ, ದೇಶಭಕ್ತಿ, ಶಿಸ್ತು, ಜಾತಿಯ ಬಗ್ಗೆ ಅಭಿಮಾನ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸಮಾಜದ ಯುವಕ, ಯುವತಿಯರು ಸುಶಿಕ್ಷಿತರಾಗುವಂತೆ ಮಾಡಲು ಸರಕಾರ ಕೊಡುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ, ಅವರಿಗೆ ತಲುಪಿಸುವ ಪ್ರಯತ್ನ ನಿರಂತರವಾಗಿ ಮಾಡುತ್ತಿದ್ದೇವೆ. ಅಲ್ಲದೆ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟವನ್ನೂ ನಿರಂತರವಾಗಿ ಮಾಡುತ್ತಿದ್ದು, ಈ ಎಲ್ಲಾ ಧ್ಯೇಯೋದ್ದೇಶಗಳೊಂದಿಗೆ 2010ನೇ ಆಸವಿಯಲ್ಲಿ ಅಧಿಕೃತವಾಗಿ “ಅಖಿಲ ಭಾರತ ಮುಂಡಾಲ ಯುವ ವೇದಿಕೆ’ ಎಂಬ ಸಂಘಟನೆಯು ಸ್ಥಾಪನೆಯಾಯಿತು.