ವಿಶ್ವದ ಜ್ಞಾನದ ಸಂಕೇತವೆಂದೇ ಇತಿಹಾಸ ಪುಟ ಸೇರಿದ, ಅಸ್ಪೃಶ್ಯ ಸಮಾಜಕ್ಕೆ ಸರ್ಯನಾಗಿ ಬೆಳಗಿದ ಆರಾಧ್ಯ ಮಹಾನ್ ಚೇತನರಾದ ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರವರಿಗೆ ಪ್ರಥಮ ನಮನಗಳು.
ಅಂಬೇಡ್ಕರವರು ೧೮೯೧ ಎಪ್ರಿಲ್ ೧೪ ರಂದು ಮಧ್ಯಪ್ರದೇಶದ ಮಾಹೆ ಎಂಬಲ್ಲಿ ‘ಮಹಾರ್’ ಎಂಬ ಅಸ್ಪೃಶ್ಯ ಜಾತಿಯಲ್ಲಿ ಜನಿಸಿದರು. ತಂದೆ ರಾಮ್ ಜೀ ಸಕ್ಷಾಲ್, ತಾಯಿ ಭೀಮಬಾಯಿ. ತಂದೆ ರಾಮ್ ಜೀ ಸಕಾಲರು ಬ್ರಿಟಿಷರ ಸೈನ್ಯದಲ್ಲಿ ಸುಬೇದರಾಗಿ ಅಧಿಕಾರವನ್ನು ನರ್ವಹಿಸಿದ್ದರು. ಇವರಿಗೆ ೧೪ ಜನ ಮಕ್ಕಳು. ೧೪ನೇ ರತ್ನನೇ ಬಾಬಾ ಸಾಹೇಬ್ ಅಂಬೇಡ್ಕರ್. ಅಂಬೇಡ್ಕರ್ರವರಿಗೆ ೧೪ನೇ ರ್ಷವಿರುವಾಗ ಇವರ ಬಾಳ ಸಂಗಾತಿಯಾಗಿ ಬಂದವರು ರಮಾಬಾಯಿ. ಇವರು ಯಶವಂತ್ ರಾವ್ ಜನ್ಮ ನೀಡಿದ ಮಕ್ಕಳಲ್ಲಿ ಮಾತ್ರ ಬದುಕುಳಿದರು.
ಕಬೀರ ಭಕ್ತಿ ಪಂಥವು ಆಗಿನ ಅಸ್ಪೃಶ್ಯ ಜನಾಂಗಕ್ಕೆ ಶಾಂತಿ ಸಮಾಧಾನಗಳನ್ನು ನೀಡುವ ಪಂಥವಾಗಿತ್ತು. ಅಸ್ಪೃಶ್ಯನೆಂಬ ಕಾರಣಕ್ಕೆ ಶಾಲೆಯಲ್ಲಿ ನಿರಂತರ ಶೋಷಣೆಯನ್ನು ಅನುಭವಿಸುತ್ತಿದ್ದ ಅಂಬೇಡ್ಕರ್ರವರಿಗೆ ಅಲ್ಲಿನ ರ್ವ ಬ್ರಾಹ್ಮಣ ಶಿಕ್ಷಕರಾದ ಫೆಂ ಅಂಬೇಡ್ಕರ್ರವರು ಭೀಮ್ ರಾವ್ ರವರ ಹೆಸರಿನ ಜೊತೆಗೆ ತಮ್ಮ ಹೆಸರನ್ನು ಸೇರಿಸಿ ಹಾಜರಿಯಲ್ಲಿ ಭೀಮ್ ರಾವ್ ಅಂಬೇಡ್ಕರ್ ಎಂದು ನಮೂದಿಸಿದರು. ಅಂದಿನಿಂದ ಭೀಮರಾವ್ ಅಂಬೇಡ್ಕರ್ ಆದರು. ನಂತರ ಎಲ್ ಫಿಸ್ಟನ್ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆಯುತ್ತಾರೆ. ಉನ್ನತ ವ್ಯಾಸಂಗಕ್ಕಾಗಿ ಬರೋಡಾದ ಮಹಾರಾಜರು ಯೋಗ್ಯ ವಿದ್ಯರ್ಥಿಗಳಿಗೆ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಓದಲು ಶಿಷ್ಯವೇತನ ಘೋಷಣೆ ಮಾಡುತ್ತಾರೆ. ಶಿಷ್ಯವೇತನವನ್ನು ಪಡೆದ
ಅಂಬೇಡ್ಕರವರು ಅಮೇರಿಕಾಕ್ಕೆ ಪ್ರಯಾಣ ಬೆಳೆಸುತ್ತಾರೆ.
ರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಜ್ಞಾನ, ರಾಜ್ಯಶಾಸ್ತ್ರದಲ್ಲಿ ಅದ್ಯಯನ ಮಾಡುತ್ತಾರೆ. ೧೯೧೫ರಲ್ಲಿ ‘ಪ್ರಾಚೀನ ಭಾರತದ ವಾಣಿಜ್ಯ’ ಪ್ರಬಂಧ ಮಂಡಿಸಿ ಎಂ.ಎ ಪದವಿ ಹಾಗೂ ೧೯೧೬ರಲ್ಲಿ ‘ಭಾರತದಲ್ಲಿ ರಾಷ್ಟ್ರೀಯ ಉತ್ಪನ್ನ’ ಎಂಬ ಪ್ರಬಂಧ ಮಂಡಿಸಿ ಪಿಎಚ್ಡಿ ಪದವಿಯನ್ನು ಪಡೆದು ಅಮೇರಿಕಾದಿಂದ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳಿದರು. ಕೊಲ್ಲಾಪುರದ ಸಾಹೋ ಮಹಾರಾಜರ ಸಹಕಾರದಿಂದ ಲಂಡನ್ನಿನಲ್ಲಿ ‘ಬ್ರಿಟಿಷ್ ಭಾರತದಲ್ಲಿ ಸಾಮ್ರಾಜ್ಯಶಾಹಿಯ ಹಣಕಾಸಿನ ಪ್ರಾಂತೀಯ ವಿಕೇಂದ್ರೀಕರಣ’ ಎಂಬ ಪ್ರಬಂಧ ಮಂಡಿಸಿ ಎಂ.ಎಸ್.ಸಿ ಪದವಿ ಪಡೆಯುತ್ತಾರೆ.
ರ್ಥಿಕ ಕಡು ಬಡತನದಿಂದ ವ್ಯಾಸಂಗವನ್ನು ನಿಲ್ಲಿಸಿ ಭಾರತದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿ, ‘ಬಹಿಷ್ಕೃತ ಭಾರತ’ ಎಂಬ ಪತ್ರಿಕೆಯನ್ನು ಪಾರಂಭಿಸುವುದರ ಜೊತೆಗೆ ಸಾಮಾಜಿಕ ಹೋರಾಟದ ಜೀವನ ಪ್ರಾರಂಭಿಸುತ್ತಾರೆ. ಅಸ್ಪೃಶ್ಯರಿಗೆ ಕೆರೆಯ ನೀರನ್ನು ಮುಟ್ಟುವ ಹಕ್ಕಿಲ್ಲ ಎಂಬ ಕಾನೂನಿನ ವಿರುದ್ಧ ೧೯೨೭ರಲ್ಲಿ ಮಹಾಡದ ಚೌಡರ ಕೆರೆಯ ನೀರನ್ನು ಮುಟ್ಟುವ ಮೂಲಕ ಚಳುವಳಿಯನ್ನು ಪ್ರಾರಂಭಿಸುತ್ತಾರೆ.
೧೯೩೦ರಿಂದ ೧೯೩೨ರವರೆಗೆ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿ ದಲಿತರಿಗೆ ಪ್ರತ್ಯೇಕ ಮತದಾನದ ಸೌಲಭ್ಯವನ್ನು ಕಲ್ಪಿಸಿಕೊಟ್ಟು, ದಲಿತರೂ ಆಳ್ವಿಕೆ ಮಾಡುವ ಅಧಿಕಾರವನ್ನು ದೊರಕಿಸಿ ಕೊಡುತ್ತಾರೆ. ೧೯೩೬ರಲ್ಲಿ ‘ಇಂಡಿಪೆಂಡೆಂಟ್ ಲೇಬರ್ ಪರ್ಟಿ’ ಸ್ಥಾಪಿಸಿ ಚುನಾವಣೆಯ ಮಹತ್ವವನ್ನು ತಿಳಿಸಿ ಕೊಡುವಲ್ಲಿ ಇವರ ಪಾತ್ರ ಮಹತ್ತರವಾದದ್ದು. ದಲಿತರಿಗೆ ಶಿಕ್ಷಣದ ಅವಶ್ಯಕತೆಯನ್ನು ಗಮನಿಸಿ ೧೯೪೬ರಲ್ಲಿ ‘ಪೀಪಲ್ಸ್ ಎಜುಕೇಶನ್ ಇನ್ ಸ್ಟಿಟ್ಯೂಷನ್’ ಸ್ಥಾಪಿಸುತ್ತಾರೆ. ಬೋಲಾಪುರದಲ್ಲಿ ದಲಿತ ವಿದ್ಯರ್ಥಿಗಳಿಗಾಗಿ ವಿದ್ಯರ್ಥಿ ನಿಲಯವನ್ನು ಸ್ಥಾಪಿಸಿದರು. ೧೯೪೭ರಲ್ಲಿ ಭಾರತದ ಮೊದಲ ಕಾನೂನು ಮಂತ್ರಿಯಾಗಿ ನೇಮಕರಾದರು. ಭಾರತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ, ಭಾರತ ದೇಶದ ಅಸ್ಪೃಶ್ಯರಿಗೆ ಸಮಾನತೆ, ಶೈಕ್ಷಣಿಕ, ಧರ್ಮಿಕ, ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟ ದೇವರು ಬಾಬಾ ಸಾಹೇಬ್ ಅಂಬೇಡ್ಕರ್. ಜಗತ್ತಿನಲ್ಲಿಯೇ ಅತಿ ಹೆಚ್ಚು ವಿದ್ಯಾಭ್ಯಾಸ ಮಾಡಿದ ಏಕೈಕ ಭಾರತೀಯ ಎಂದರೆ ಅದು ನಮ್ಮ ಅಂಬೇಡ್ಕರ್. ಬೆಳಕಿನ ಹಾದಿ ತೋರಿಸಿದ ಸರ್ಯನಿಗೆ ಕೋಟಿ ಕೋಟಿ ನಮಸ್ಕಾರ.